ನಮ್ಮ ಬಗ್ಗೆ

ಕರ್ನಾಟಕ ಸಾವಯವ ಕೃಷಿ ಕೇಂದ್ರ (ರಿ)


ಕರ್ನಾಟಕ ಸಾವಯವ ಕೃಷಿ ಕೇಂದ್ರ (ರಿ) ಸಾವಯವ ಕೃಷಿ ಪದ್ದತಿಯಲ್ಲಿ ನಂಬಿಕೆಯಿರಿಸಿ ಕೃಷಿಯನ್ನು ಸಂಪೂರ್ಣ ಸಾವಯವಮಯವಾಗಿಸಬೇಕು ಎಂಬ ಕನಸಿನಲ್ಲಿ ಹಾತೊರೆಯುವ ರೈತರ ಆಶಾಕಿರಣ.

ಭವ್ಯ ಪರಂಪರೆಯುಳ್ಳ ನಮ್ಮ ಸಿರಿಗಂಧದ ನಾಡು ಕರುನಾಡಿನಿಂದ ಅತ್ಯುತ್ತಮ ಗುಣಮಟ್ಟದ ಕೃಷಿ ಶಕ್ತಿ ಎಂಬ N.P.K ಯುಕ್ತ ಸಂಪೂರ್ಣ ಸಾವಯವ ಗೊಬ್ಬರವನ್ನು ವಿತರಿಸುವ ಕರ್ನಾಟಕದ ಹೆಮ್ಮೆಯ ಸಂಸ್ಥೆ.

ಸಂಸ್ಥೆಯು 2018 ರಿಂದಲೂ ಕರ್ನಾಟಕದಾಧ್ಯಂತ ಕೃಷಿ ಶಕ್ತಿ ಎಂಬ ಹೆಸರಿನ N.P.K ಯುಕ್ತ ಸಾವಯವ ಗೊಬ್ಬರವನ್ನು ರೈತರಿಗೆ ವಿತರಣೆ ಮಾಡುತ್ತಿದ್ದು ತನ್ನ ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದೇ ಕೃಷಿ ಶಕ್ತಿ ಬಳಕೆದಾರ ರೈತನ ಮುಖದಲ್ಲಿ ತಾನು ಕೃಷಿಶಕ್ತಿಯ ಬಳಕೆದಾರನಾಗಿರುವುದಕ್ಕೆ ಸಂತಸ ಮತ್ತು ಹೆಮ್ಮೆಭರಿತ ಮಂದಹಾಸದ ನಗು ಬೀರುವಂತೆ ಮಾಡಿರುವುದು ಸಂಸ್ಥೆಯ ಗುಣಮಟ್ಟದ ಅತ್ತ್ಯುತ್ತಮ ಕಾರ್ಯನಿರ್ವಹಣೆಗೆ ಸಾಕ್ಷಿಯಾಗಿದೆ. ಕೃಷಿ ಶಕ್ತಿ ಬಳಕೆದಾರ ರೈತನ ಪರಿಪೂರ್ಣ ಸಂತೃಪ್ತಿಯೆ ಸಂಸ್ಥೆಯ ಮೊದಲ ಆದ್ಯತೆಯಾಗಿದೆ.

ಕೃಷಿ ಶಕ್ತಿ N.P.K ಯುಕ್ತ ಸಾವಯವ ಗೊಬ್ಬರವು ಕೇಂದ್ರೀಯ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು (GKVK) ಮತ್ತು ಕೃಷಿ ಮತ್ತು ತೋಟಗಾರಿಕಾ ಮಹಾ ವಿಶ್ವವಿದ್ಯಾಲಯ ಶಿವಮೊಗ್ಗ (UAHS) ಇಂತಹ ಹೆಮ್ಮೆಯ ಕೃಷಿ ವಿಶ್ವವಿದ್ಯಾನಿಲಯಗಳಿಂದ ಪರಿಶೀಲಿಸಿ ಪ್ರಮಾಣೀಕರಿಸಲ್ಪಟ್ಟ ಸಾವಯವ ಗೊಬ್ಬರವಾಗಿದ್ದು ತನ್ನ ಅತ್ಯುತ್ತಮ ಗುಣಮಟ್ಟದಿಂದಲೇ ರೈತ ಬಾಂಧವರಿಗೆ ಅತೀ ಹತ್ತಿರವಾಗಿರುವುದು ನಮ್ಮ ಸಂಸ್ಥೆಯ ಹೆಮ್ಮೆಯಾಗಿದೆ.

ಸಂಸ್ಥೆಯು ರೈತರಿಗೆ ಕೃಷಿಶಕ್ತಿಯನ್ನು ವಿತರಣೆ ಮಾಡುವಾಗ ತನ್ನ ಬಳಕೆದಾರ ಕೃಷಿಕನಿಗೆ ತನ್ನದೇ ಆದ ಮೆಂಬರ್ಶಿಫ್ ಪಾಸ್ಬೂಕ್ ಮೂಲಕ ರೈತರಿಗೆ ವಿಶೇಷ ಸಬ್ಸಿಡಿ ದರದಲ್ಲಿ ವಿತರಣೆ ಮಾಡುತ್ತಿದ್ದು ಮೆಂಬರ್ಶಿಫ್ ಪಾಸ್ಬೂಕ್ ಉಚಿತವಾಗಿದ್ದು ಇದಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಇದು ಸಂಸ್ಥೆ ಮತ್ತು ರೈತರ ನಡುವೆ ಸುಮಧುರ ಭಾಂದವ್ಯ ಬೆಳೆಯುವಂತೆ ಮಾಡುವಲ್ಲಿಯೂ ಪ್ರಮುಖ ಪಾತ್ರವಹಿಸಿದೆ. ಕೃಷಿಶಕ್ತಿ ಬಳಕೆದಾರ ರೈತರು ಕೃಷಿಶಕ್ತಿ ಖರೀದಿಸಿದ ಮೇಲೆ ಯಾವುದೇ ಸಾಗಾಟ ವೆಚ್ಚವನ್ನು ಭರಿಸುವಂತಿಲ್ಲ. ಸಂಸ್ಥೆಯೇ ರೈತರ ಮನೆಬಾಗಿಲಿಗೆ ಉಚಿತ ಸಾಗಾಟ ವೆಚ್ಚದಲ್ಲಿ ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಿಸುತ್ತಿದೆ. ಹಾಗಾಗಿ ಸಂಸ್ಥೆಯು ರೈತರಿಗೆ ಇನ್ನಷ್ಟು ಹತ್ತಿರವಾಗಿ ರೈತ ಸ್ನೇಹಿಯಾಗಿ ಬೆಳೆಯುತ್ತಿದೆ.

ಕೃಷಿಶಕ್ತಿಯ ಬಳಕೆಯಲ್ಲಿ ಸಂಸ್ಥೆಯು ಹರಳಿಂಡಿ, ಬೇವಿನಹಿಂಡಿ, ಸುಣ್ಣ ಟ್ರೈಕೋಡರ್ಮ, ಸುಡುಮೋನಾಸ್, ಉತ್ಕ್ರಷ್ಟ ದರ್ಜೆಯ ಕೋಳಿಗೊಬ್ಬರ, ಎಲುಬಿನಹುಡಿ, ಮೀನಿನ ಗೊಬ್ಬರವನ್ನು ಬಳಸಿ ತಯಾರಿಸುತ್ತಿದ್ದು N.P.K. ಯುಕ್ತ ಸಂಪೂರ್ಣ ಸಾವಯವವಾಗಿದ್ದು ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಇದು ಕೃಷಿ ಚಟುವಟಿಕೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಕೃಷಿಗೆ ತಗಲುವ ಹೆಚ್ಚಿನ ರೋಗ ರುಜಿನಗಳಿಂದ ಕೃಷಿಯನ್ನು ದೂರವಿರಿಸುವುದು ಮಾತ್ರವಲ್ಲದೇ ಕೃಷಿ ಕೂಡ ಸಮೃದ್ಧವಾಗಿ ಬೆಳೆಯುವಂತೆ ಮಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಕೃಷಿಯು ಅಡಿಕೆ, ತೆಂಗು, ಭತ್ತ, ಕಾಫಿ, ರಬ್ಬರ್, ತರಕಾರಿ ಕೃಷಿಗಳಿಗೆ ಬಳಕೆ ಮಾಡುವುದರಿಂದ ಶೀಘ್ರ ಮತ್ತು ಅತ್ಯುತ್ತಮ ಫಲಿತಾಂಶ ಕಾಣ ಬಹುದಾಗಿದೆ.