ಕೃಷಿ ಶಕ್ತಿ 50 ಕೆ.ಜಿ.

ತಿಳಿದುಕೊಳ್ಳಿ

ರೈತ ಬಾಂಧವರೇ ನಕಲಿ ಸಾವಯವ ಗೊಬ್ಬರ ಮಾರಾಟ ಸಂಸ್ಥೆಗಳಿಂದ ಮೋಸ ಹೋಗಿದ್ದು ಸಾಕು. ನೀವು ನೀಡುವ ಹಣಕ್ಕೆ ಯೋಗ್ಯವಾದ ಉತ್ಪನ್ನ ನಾವು ವಿತರಣೆ ಮಾಡುತ್ತಿದ್ದೇವೆ. ನೀವೇ ಚೀಲ ತೆರೆದು ಪರೀಕ್ಷಿಸಿ ನಂತರ ಹಣ ಪಾವತಿ ಮಾಡಿ. ಪ್ರತಿ ಗಿಡಗಳಿಗೆ 3 ಕೆ.ಜಿ.ಯಂತೆ ಸತತ 2 ವರ್ಷ ಬಳಸಿದಲ್ಲಿ ಪರಿಣಾಮಕಾರಿ ಉತ್ತಮ ಫಲಿತಾಂಶ ಕಾಣಬಹುದಾಗಿದೆ.

ರೈತರ ಭಾವಚಿತ್ರ ಹಾಗೂ ವಿಳಾಸ ನೀಡಿ ಕೃಷಿ ಶಕ್ತಿ ಆರ್ಡರ್ ಮಾಡುವ ಕೃಷಿಕರಿಗೆ ಕರ್ನಾಟಕ ಆರ್ಗಾನಿಕ್ ಸೆಂಟರ್ನೊಂದಿಗೆ ರೈತರ ಭಾಂದವ್ಯ ವೃದ್ಧಿಸುವ ಸಲುವಾಗಿ ನೀಡಲಾಗುತ್ತಿದೆ. ಇದು ಒಂದು NGO ಸಂಸ್ಥೆಯಾಗಿದ್ದು ಯಾವುದೇ ರೀತಿಯ ಇಲಾಖೆಗೆ ಒಳಪಟ್ಟಿರುವುದಿಲ್ಲ ಕೃಷಿ ಶಕ್ತಿ ಹೊರತು ಸಂಸ್ಥೆ ಬೇರೆ ಯಾವುದೇ ಉತ್ಪನ್ನ ವಿತರಣೆ ಮಾಡುವುದಿಲ್ಲ.


ಕೃಷಿ ಶಕ್ತಿಯ ವೈಶಿಷ್ಟ್ಯ


  • ಎಲ್ಲಾ ಬೆಳೆಗಳಿಗೂ ಅತ್ಯಾವಶ್ಯಕವೆನಿಸಿದಂತಹ ಮೂಲ ಪೋಷಕಾಂಶಗಳನ್ನು ಒದಗಿಸುತ್ತದೆ.
  • ಸಾರಜನಕವು ಗಾಳಿಯಲ್ಲಿ ಆವಿಯಾಗದೆ ನಿರಂತರವಾಗಿ ಬೇರುಗಳಿಗೆ ಲಭ್ಯವಾಗುತ್ತದೆ.
  • ಅತ್ಯಂತ ಸತ್ವಶಾಲಿ ಪರಿಣಾಮಕಾರಿ ನೈಸರ್ಗಿಕ ಗೊಬ್ಬರ.
  • ಸುಣ್ಣದ ಅಂಶವು ಮಣ್ಣಿನ ಆಮ್ಲಿಯತೆಯನ್ನು ಕಡಿಮೆ ಮಾಡುತ್ತದೆ.
  • ಕಾಂಪೋಸ್ಟ್ ರೂಪದಲ್ಲಿ ಪುಡಿಯಾಗಿರುವುದರಿಂದ ಬೆಳೆಗಳಿಗೆ ಬಳಸಲು ಅತೀ ಸುಲಭ ಮತ್ತು ಬೇಗನೆ ಮಣ್ಣಿನಲ್ಲಿ ಸೇರಿಕೊಳ್ಳುತ್ತದೆ.
  • ಮಣ್ಣಿನ ಸಡಿಲತೆಯನ್ನು ಹೆಚ್ಚಿಸುತ್ತದೆ.
  • ಮಣ್ಣಿನಲ್ಲಿ ಪರಿಣಾಮಕಾರಿಯಾಗಿ ಬೆರೆತು ರೋಗನಿರೋಧಕ ಶಕ್ತಿ ವೃದ್ಧಿಸಿ ಮಣ್ಣಿನ ಆರೋಗ್ಯದ ಜೊತೆ ಕೃಷಿಯನ್ನು ಸಮೃದ್ಧವಾಗಿ ಬೆಳೆಯುವಂತೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

ಉಪಯೋಗಿಸುವ ವಿಧಾನ:


  • ದ್ರಾಕ್ಷಿ ಗಿಡಕ್ಕೆ: ಬುಡದಿಂದ 2 ಅಡಿ ದೂರ 4 .ಕೆ.ಜಿ.
  • ತೆಂಗಿನ ಮರಗಳಿಗೆ ಬುಡದಿಂದ 2 ಅಡಿ ದೂರ 5 ಕೆ.ಜಿ. 5 ವರ್ಷದೊಳಗಿನ ಸಸಿ ಹಾಗೂ ಹೊಸದಾಗಿ ನೆಡುವ ಗಿಡಗಳಿಗೆ 2 ಕೆ.ಜಿ ರಿಂದ 3 ಕೆ.ಜಿ.
  • ಅಡಿಕೆ ಗಿಡಗಳಿಗೆ: 1 ಅಡಿ ದೂರದಲ್ಲಿ 3 ಕೆ.ಜಿ ರಿಂದ 4 ಕೆ.ಜಿ. ಸಸಿಗಳಿಗೆ 1 ಕೆ.ಜಿ ರಿಂದ 1.5 ಕೆ.ಜಿ
  • ಗೇರು, ಮಾವು, ಬಾಳೆ, ದಾಳಿಂಬೆ ಗಿಡಗಳಿಗೆ: 1.5 ಕೆ.ಜಿ. ಸಸಿಗಳಿಗೆ 1 ಕೆ.ಜಿ.

ವಿವಿಧ ಬೆಳೆಗಳಿಗೆ ಶಿಫಾರಸ್ಸುಗೊಂಡ ಕೃಷಿ ಶಕ್ತಿ ಗೊಬ್ಬರದ ಪ್ರಮಾಣ:


ಬೆಳೆ ಪ್ರಮಾಣ ಕಿ.ಗ್ರಾಂ.
ದಾಳಿಂಬೆ - ಪ್ರತಿ ಗಿಡಕ್ಕೆ 4 ಕೆ.ಜಿ.
ದ್ರಾಕ್ಷಿ- ಪ್ರತಿ ಗಿಡಕ್ಕೆ 4 .ಕೆ.ಜಿ.
ತೆಂಗು - ಪ್ರತಿ ಮರಕ್ಕೆ 5 ಕೆ.ಜಿ.
ಅಡಿಕೆ - ಪ್ರತಿ ಮರಕ್ಕೆ 3 ಕೆ.ಜಿ. ರಿಂದ 4 ಕೆ.ಜಿ.
ಬಾಳೆ - ಪ್ರತಿ ಗಿಡಕ್ಕೆ 1 ಕೆ.ಜಿ.
ಟೊಮೆಟೋ - ಪ್ರತಿ ಎಕರೆಗೆ. 500 ಕೆ.ಜಿ
ಶುಂಠಿ - ಪ್ರತಿ ಎಕರೆಗೆ 400 ಕೆ.ಜಿ.
ರೇಷ್ಮೆ - ಪ್ರತಿ ಎಕರೆಗೆ 400 ಕೆ.ಜಿ.
ತಂಬಾಕು - ಪ್ರತಿ ಎಕರೆಗೆ 500 ಕೆ.ಜಿ.
ಪಪ್ಪಾಯಿ - ಪ್ರತಿ ಎಕರೆಗೆ 400 ಕೆ.ಜಿ.